ನೀವು ಪ್ರೀತಿಸುವ ದಂಪತಿಗಳು ಅಥವಾ ನೀವು ದಂಪತಿಗಳು ನಿಮ್ಮ ಸಂಗಾತಿಯೊಂದಿಗೆ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಹೊರಟಿದ್ದರೆ, ಉಸಿರುಕಟ್ಟುವ ಹೂವುಗಳು, ವಿವಾಹ ವಾರ್ಷಿಕೋತ್ಸವದ ಕೇಕ್ ಮತ್ತು ದಂಪತಿಗಳಿಗೆ ಅಥವಾ ನಿಮ್ಮ ಸಂಗಾತಿಗಾಗಿ ಬರೆದ ಟಿಪ್ಪಣಿಯಿಲ್ಲದೆ ಆಚರಣೆಯು ಅಪೂರ್ಣವಾಗಿರುತ್ತದೆ. ಹೃದಯ.
ಸರಿಯಾದ ಪದಗಳನ್ನು ಕಂಡುಹಿಡಿಯುವುದು ಮತ್ತು ಈ ದಿನಕ್ಕಾಗಿ ನಿಮ್ಮ ಉಲ್ಲಾಸವನ್ನು ವ್ಯಕ್ತಪಡಿಸುವುದು ಯಾವಾಗಲೂ ಸುಲಭವಲ್ಲ, ಅದಕ್ಕಾಗಿಯೇ ನಲ್ಲಿ ನಾವು ನಿಮ್ಮ ಪತಿ/ಪತ್ನಿ, ಸಹೋದರ/ಸಹೋದರಿ ಅಥವಾ ಪೋಷಕರ ವಿವಾಹ ವಾರ್ಷಿಕೋತ್ಸವದ ದಿನಕ್ಕಾಗಿ ಕೆಲವು ವಿಶೇಷ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ಬರೆದಿದ್ದೇವೆ. ಹೆಚ್ಚಾಗಿ, ನಾವು ಅವರನ್ನು ಎಷ್ಟು ಪ್ರೀತಿಸುತ್ತೇವೆ ಮತ್ತು ಅವರ ಆಚರಣೆಗಳ ದಿನಗಳು ನಮಗೆ ಎಷ್ಟು ಅರ್ಥವಾಗುತ್ತವೆ ಎಂದು ಹೇಳಲು ನಾವು ಪದಗಳನ್ನು ಕಳೆದುಕೊಳ್ಳುತ್ತೇವೆ. ಪ್ರೀತಿ ಮತ್ತು ಶುಭ ಹಾರೈಕೆಗಳ ಸಿಹಿ ಸಂದೇಶವನ್ನು ಬರೆಯಲು ನಿಮಗೆ ಸಹಾಯ ಮಾಡಲು ನಾವು ವಿವಾಹ ವಾರ್ಷಿಕೋತ್ಸವದ ಶುಭಾಶಯಗಳ ಪಟ್ಟಿಯನ್ನು ಸಂಗ್ರಹಿಸಿದ್ದೇವೆ.
Happy Anniversary Wishes In Kannada.
ನಿಮ್ಮ ಜೀವನ ಹಾಲು ಜೇನಿನಂತೆ..
ಎಂದೆಂದಿಗೂ ಗಟ್ಟಿಯಾಗಿರಲಿ…
ದೇವರ ಕೃಪೆ ಸದಾ ನಿಮ್ಮೊಂದಿಗಿರಲಿ…
ಯಶಸ್ಸು ನಿಮ್ಮದಾಗಲಿ…
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಹಾರ್ದಿಕ ಶುಭಾಷಯಗಳು
ನಿಮ್ಮ ಪ್ರೀತಿ ಪರಿಶುದ್ಧ.
ನಿಮ್ಮ ಪ್ರೀತಿ ಅಮರ…
ಅದು ಹೀಗೆ ಎಂದೆಂದಿಗೂ ನಿಮ್ಮ ಜೀವನದುದ್ದಕ್ಕೂ ಕೂಡಿರಲಿ
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಹಾರ್ದಿಕ ಶುಭಾಷಯಗಳು
ನಿಮ್ಮ ಸುಮಧುರ ದಾಂಪತ್ಯ ಜೀವನದ ಮೊದಲ ವರ್ಷ ಪುರೈಸಿದ ಸುಂದರ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಹಾರ್ದಿಕ ಶುಭಾಷಯಗಳು
ಪ್ರೀತಿಯ ಅಣ್ಣ ಅತ್ತಿಗೆ ನಿಮ್ಮ ದಾಂಪತ್ಯ ಜೀವನ ಹೀಗೆ ಎಂದೆಂದಿಗೂ ಸಿಹಿಯಾಗಿ ಸಂತೋಷದಿಂದ ತುಂಬಿರಲಿ.
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ಏಳೇಳು ಜನ್ಮಕೂ ನಿಮ್ಮ ಈ ಸಂಬಂಧ ಹೀಗೆ ಸಂತೋಷದಿಂದ ಕೂಡಿರಲಿ. ನಿಮ್ಮೆಲ್ಲಾ ಕನಸು ನನಸಾಗಲಿ ಎಂದು ಹಾರೈಸುವೆ.ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ನೀವು ಒಬ್ಬರಿಗೊಬ್ಬರು ಹೇಳಿ ಮಾಡಿಸಿದಂತ ಜೋಡಿ…ನಿಮ್ಮ ಜೋಡಿ ಹಾಲು ಜೇನಿನನಂತೆ.
ಈ ಜೋಡಿ ವಿವಾಹ ಆದ ಈ ಸುದಿನದಂದು ನಿಮ್ಮ ಜೋಡಿ ಹೀಗೆ ಸದಾಕಾಲ ಕುಷಿಯಾಗಿರಿ ಎಂದು ಹಾರೈಸುತ್ತೇನೆ.
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ಸದಾಕಾಲ ಸುಖವಾಗಿ ಕುಶಿ ಕುಷಿಯಿಂದ ಬಾಳಿ. ಪ್ರೀತಿ ವಾತ್ಸಲ್ಯ ಎಂದೆಂದಿಗೂ ನಿಮ್ಮೊಂ ದಿಗಿರಲಿ.
Wedding Anniversary Wishes In Kannada.
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ಜೀವನದುದ್ದಕ್ಕೂ ನಿಮ್ಮ ಈ ಜೋಡಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುವೆ. ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ನಿಮ್ಮ ಈ ಸುಂದರ ಜೋಡಿ ಹೀಗೆ ಎಂದೆಂದೂ ನಗುನಗುತಾ ಜೀವನದುದ್ದಕ್ಕೂ ನೂರು ವರ್ಷ ಸುಖವಾಗಿ ಬಾಳಿ ಎಂದು ಹಾರೈಸುವೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ಬಿಸಿಲು ಮಳೆ ಸೃಷ್ಟಿಗೆ ಮೂಡಲಿ ಕಾಮನಬಿಲ್ಲಿನ ಅಲಂಕಾರ ,
ನೋವು ನಲಿವ ಬದುಕಿಗೆ ಆಗಲಿ,ಹಾಲು ಜೇನಿನ ಅಭಿಷೇಕ…
ಸ್ನೇಹ ಪ್ರೀತಿ ಕಾಳಜಿಗೆ ಹುಟ್ಟಲಿ ಆತ್ಮವಿಶ್ವಾಸದ ಅಭಿಮಾನ…
ವಿವಾಹ ದಿನದ ಆಚರಣೆಗೆ ಬರಲಿ ಹೂ ಮಳೆಯ ಆಮಂತ್ರಣ…
ಸದಾ ಖುಷಿ ನೆಮ್ಮದಿಗೆ ಹರಿಯಲಿ ಅನುರಾಗದ ಸವಿಗಾನ….
ವಿವಾಹ ವಾರ್ಷಿಕೋತ್ಸವ ಎಂದರೆ ವರ್ಷಕ್ಕೊಮ್ಮೆ
ವಾರ್ಷಿಕೋತ್ಸವ ಆಚರಿಸಿ ಮರೆತುಬಿಡುವುದಲ್ಲ;
ಪ್ರತಿ ದಿನ, ಪ್ರತಿ ಕ್ಷಣ ಸಂಬಂಧಗಳು
ಹಳಸದಂತೆ ಬಾಳಿ, ಬದುಕಿ,
ಬಂಧ, ಅನುಬಂಧವನ್ನು ಎಂದೆಂದಿಗೂ ಚಿರನೂತನವಾಗಿರಿಸುವುದು…
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು..
ವರ್ಷಗಳ ಹಿಂದೆ ಕಳೆದ ಆ ಸುಂದರ ಸವಿ ಘಳಿಗೆ
ಹರುಷ ತಂದಿದೆ ಇಂದು ನಿಮ್ಮಯ ಬಾಳಿಗೆ
ನಿಮ್ಮಿಬ್ಬರ ಈ ಪ್ರೇಮೋತ್ಸವ
ಮನೆ ತುಂಬೆಲ್ಲಾ ತುಂಬಿದೆ …
ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯ,
ಕೊನೆ ಇಲ್ಲದೆ ಸಾಗಲಿ ಈ ಪ್ರೀತಿ ಎಂಬುದೇ ನನ್ನ ಆಶಯ…
ಈ ಶುಭದಿನ ನಮ್ಮಿಬ್ಬರ ದಾಂಪತ್ಯಕ್ಕೆ ವರುಷ ತುಂಬಿದ ಹರುಷದ ದಿನ…
ನನ್ನೊಲವಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…
Also Check: Anniversary Wishes in Marathi
Happy Marriage Anniversary Wishes In Kannada.
ಪ್ರತಿದಿನ ಪ್ರತಿಕ್ಷಣ ಪ್ರೀತಿಯಿಂದ ದಾಂಪತ್ಯವನ್ನು ಗಟ್ಟಿಯಾಗಿಸುತ್ತಿರುವೆ,
ವರುಷಕೊಮ್ಮೆ ಆ ದಾಂಪತ್ಯಕ್ಕೆ ವಾರ್ಷಿಕೋತ್ಸವದ ಹೆಸರಿನಲ್ಲಿ ಪ್ರೀತಿಹೆಚ್ಚಿಸುತ್ತಿರುವೆ.
ನನ್ನೊಲವಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು..
ನನ್ನ ಬಾಳಿನಲ್ಲಿ ನೀನು ಜೊತೆಯಾಗಿರುವೆ,
ನೋವು ನಲಿವಿನಲ್ಲೂ ಜೊತೆಯಾಗುತ್ತಿರುವೆ,
ಏಳೇಳು ಜನುಮದಲ್ಲೂ ನೀನೇ ನನ್ನ ಬಾಳಸಂಗಾತಿಯಾಬೇಕು,
ನಮ್ಮಿಬ್ಬರ ಉತ್ತಮ ದಾಂಪತ್ಯಕ್ಕೆ ನಮ್ಮ ಪ್ರೀತಿಗೆ ಸಾಕ್ಷಿಯಾಗಬೇಕು….
ನನ್ನ ನಿನ್ನ ಅನುಬಂಧವನ್ನು ಬೆಸೆದ ವಿವಾಹವೆಂಬ ಹೊಸ ಬಂಧನಕ್ಕೆ ಇಂದು ವರುಷದ ಹರುಷ…
ಕೆಲವರ ಪಾಲಿಗೆ ಪರಿಪೂರ್ಣ ದಾಂಪತ್ಯ ಅನ್ನೋದು ಕೇವಲ ಒಂದು ಮಿಥ್ಯೆ, ದಂತಕಥೆ, ಕಾಗಕ್ಕ-ಗುಬ್ಬಕ್ಕ ಕಥೆ, ಅಥವಾ ಒಂದು ಸುಂದರ ಭ್ರಮೆಯೇ ಆಗಿರಬಹುದು. ಆದರೆ ನನ್ನ ಪಾಲಿಗೆ, ಪರಿಪೂರ್ಣ ದಾಂಪತ್ಯ ಅನ್ನೋದು ನಿಮ್ಮೀರ್ವರ ನಡುವೆ ಜೀವಂತವಾಗಿರೋ ಒಂದು ನೈಜ ಅದ್ಭುತ!! ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು.
ನಿಮ್ಮೀರ್ವರ ದಾಂಪತ್ಯಜೀವನದ ರಜತ ಮಹೋತ್ಸವಕ್ಕೆ ಕೇವಲ 5 ವರ್ಷಗಳಷ್ಟೇ ಬಾಕಿ! ಆ ಐದು ವರ್ಷಗಳು ಹಾಗೂ ಮುಂಬರುವ ವರ್ಷಗಳೂ ಅತ್ಯಂತ ಸಂತಸದಾಯಕವಾಗಿರಲೆಂದು ಆಶಿಸುವೆ!! ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು.
ವೃದ್ಧ ದಂಪತಿಗಳಾಗಿರೋ ನಿಮ್ಮ ಕಾಲುಗಳ ಶಕ್ತಿ ಕುಂದಿರಬಹುದು ಹಾಗೂ ಸುಂದರ ಸುಕ್ಕುಗಳು ನಿಮ್ಮ ಮುದ್ದು ಮುಖಗಳನ್ನ ಅಲಂಕರಿಸಿರಲೂ ಬಹುದು, ಆದರೆ ಜೀವನದ ಯಾವುದೇ ಘಟ್ಟದಲ್ಲೇ ಆಗಿರಲೀ ನಿಮ್ಮಿಬ್ಬರ ನಡುವಿನ ಪ್ರೀತಿಯೆಂದೂ ಮಾಸಿದಂತೆ ಕಾಣೋಲ್ಲ. ವಿವಾಹಜೀವನದ ಸುವರ್ಣಮಹೋತ್ಸವದ ಹಾರ್ಧಿಕ ಶುಭಾಶಯಗಳು!
Happy Wedding Anniversary In Kannada.
ನಿಮ್ಮಿಬ್ಬರ ಜೀವನದ ಮೈಲಿಗಲ್ಲುಗಳನ್ನಾಚರಿಸಲು ನೀವೇನೂ ನಿಮ್ಮ 10ನೆಯ, 20ನೆಯ, ಅಥವಾ 25ನೆಯ ವರ್ಷಾಚರಣೆಗಾಗಿ ಕಾಯುವ ಅಗತ್ಯವಿಲ್ಲ. ನಿಮ್ಮಿಬ್ಬರ ಪ್ರತೀ ವರ್ಷದ ವೈವಾಹಿಕ ವಾರ್ಷಿಕೋತ್ಸವವೂ ಒಂದು ವಿಶೇಷವಾದ ಮೈಲಿಗಲ್ಲೇ. ಹಾರ್ಧಿಕ ಶುಭಾಶಯಗಳು
ನೀವಿಬ್ಬರೂ ಪರಸ್ಪರ ಹಂಚಿಕೊಳ್ಳುವ ಪ್ರತಿದಿನವೂ ಅದರ ಹಿಂದಿನ ದಿನಕ್ಕಿಂತ ಇನ್ನಷ್ಟು ರಸಮಯವಾಗಿರಲಿ. ಹ್ಯಾಪೀ ಆನವರ್ಸರಿ!
ಮತ್ತೊಂದು ವರ್ಷ ಕಳೆದು ಹೋಯಿತಾದರೂ, ನಿಜವಾದ ಪ್ರೀತಿ ಅಸ್ತಿತ್ವದಲ್ಲಿರುತ್ತದೆ ಅನ್ನೋದನ್ನ ಜಗತ್ತಿಗೆ ತೋರಿಸಿಕೊಡೋದನ್ನ ನೀವು ಮುಂದುವರೆಸುತ್ತಿರುವಿರಿ. ವೈವಾಹಿಕ ವಾರ್ಷಿಕೋತ್ಸವದ ಹಾರ್ಧಿಕ ಅಭಿನಂದನೆಗಳು.
ನಿಜವಾದ ಪ್ರೀತಿ ಎಂದೆಂದಿಗೂ ಅಮರ. ಕಾಲಚಕ್ರ ಉರುಳಿದಂತೆಲ್ಲ ಅದು ಮತ್ತಷ್ಟು ಗಾಢವಾಗುತ್ತದೆ ಮತ್ತು ಇನ್ನಷ್ಟು ಪರಿಶುದ್ಧವಾಗುತ್ತದೆ. ನಿಮ್ಮಿಬ್ಬರ ನಡುವಿನ ಪ್ರೀತಿ ಅತ್ಯಂತ ಗಾಢವಾದದ್ದು ಮತ್ತು ಅತ್ಯಂತ ಪರಿಶುದ್ಧವಾದದ್ದು ಅನ್ನೋದು ಹೊಳೆಯುವ ಸೂರ್ಯನಷ್ಟೇ ಸತ್ಯ. ವೈವಾಹಿಕ ವಾರ್ಷಿಕೋತ್ಸವದ ಶುಭಾಶಯಗಳು
ದಾಂಪತ್ಯ ಜೀವನದ 25 ಅರ್ಥಪೂರ್ಣ ವರ್ಷಗಳನ್ನು ಪೂರೈಸಿದ ಅನುಪಮ ಜೋಡಿಗೆ ವೈವಾಹಿಕ ರಜತಮಹೋತ್ಸವದ ಹಾರ್ಧಿಕ ಅಭಿನಂದನೆಗಳು
ದಾಂಪತ್ಯ ಜೀವನದ ಪ್ರಥಮ ವರ್ಷವನ್ನು ನೀವು ಆಚರಿಸುತ್ತಿರುವ ಈ ಶುಭಸಂದರ್ಭದಲ್ಲಿ, ನಿಮ್ಮಿಬ್ಬರ ಬಾಂಧವ್ಯವು ಇನ್ನಷ್ಟು ಗಟ್ಟಿಯಾಗಲಿ ಮತ್ತು ನಿಮ್ಮ ಜೀವನಪರ್ಯಂತ ನೀವಿಬ್ಬರೂ ತುಂಬು ಸಂತಸದೊಂದಿಗೆ ಜೊತೆಯಾಗಿ ಬಾಳುವಂತಾಗಲಿ ಎಂದು ನನ್ನ ಪ್ರಾರ್ಥನೆ, ಹಾರ್ಧಿಕ ಶುಭಕಾಮನೆಗಳು
ಸುಮಧುರ ದಾಂಪತ್ಯ ಜೀವನದ ಒಂದು ವರ್ಷವನ್ನು ಪೂರೈಸಿದ ನಲ್ಮೆಯ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು
Also Check: Anniversary Wishes in Bengali
Marriage Anniversary in Kannada Quotes & Messages.
ನಲ್ಲೆಯ ಜೊತೆಗೆ ಸಪ್ತಪದಿ ತುಳಿದು
ಸಪ್ತವರುಷಗಳೇ ಕಳೆದ ಸಂತಸ..!
ಸುಖ ದುಃಖ ಸವಿದು ಸಾಗುತಿಹುದು ನೌಕೆ
ಸಂಸಾರ ಸಾಗರದಲಿ..!
ಬಿರುಗಾಳಿಗೆ ಸಿಲುಕದೆ,
ಹೊಯ್ದಾಡದೆ ಮುನ್ನಡೆಸು
ದೇವ ಎಂದು ಪ್ರಾರ್ಥಿಸುವೆ..
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ನೂರು ಕಾಲ ಜೊತೆ ಜೊತೆಯಾಗಿ ಹೆಜ್ಜೆ ಹಾಕ್ತಾ,
ಖುಷಿ ಖುಷಿಯಾಗಿ ಸಾಗಲಿ ನಿಮ್ಮ ಪಯಣ,
ಪರಿಣಯದ ನಂಟು ಜನ್ಮ ಜನ್ಮದ ಗಂಟು,
ಎಂದಿಗೂ ಆರದಿರಲಿ ನಿಮ್ಮೊಲುಮೆಯ ಅಂಟು …
50 ವರ್ಷಗಳ ದಾಂಪತ್ಯ ಪೂರೈಸುತ್ತಿರುವ ಅಮ್ಮ-ಅಪ್ಪ …..
ಸದಾ ಆಯುಷ್ಯಾರೋಗ್ಯ, ನಗು -ನೆಮ್ಮದಿ ತುಂಬಿದ,
ತುಂಬು ದಾಂಪತ್ಯ ನಿಮ್ಮದಾಗಲಿ …
ಸಂಭ್ರಮದ ನೂರಾರು ವಿವಾಹ ವಾರ್ಷಿಕೋತ್ಸವ ನಿಮ್ಮದಾಗಲಿ …
ತುಂಬು ಹೃದಯದ ಶುಭಾಶಯಗಳು …
ವಿವಾಹ ವಾರ್ಷಿಕೋತ್ಸವ ಶುಭಾಶಯಗಳು..
ನೂರ್ಕಾಲ ಸಂತಸ ತುಂಬಿರಲಿ
ನಿಮ್ಮ ಜೀವನದಲ್ಲಿ ಚಾಮುಂಡೇಶ್ವರಿ ದೇವಿಯ
ಆಶೀರ್ವಾದ ಸದಾ ಕಾಲ ಇರಲಿ ಎಂದು ಪ್ರಾರ್ಥಿಸುತ್ತೇನೆ …
#25 ವರ್ಷಗಳ ದಾಂಪತ್ಯ ಪೂರೈಸುತ್ತಿರುವ ನನ್ನ ಅಣ್ಣ -ಅತ್ತಿಗೆಗೆ
ಸದಾ ಆಯುಷ್ಯಾರೋಗ್ಯ, ನಗು-ನೆಮ್ಮದಿ ತುಂಬಿದ,
ತುಂಬು ದಾಂಪತ್ಯ ನಿಮ್ಮದಾಗಲಿ …
ಸಂಭ್ರಮದ ನೂರಾರು ವಿವಾಹ ವಾರ್ಷಿಕೋತ್ಸವ ನಿಮ್ಮದಾಗಲಿ …
ತುಂಬು ಹೃದಯದ ಶುಭಾಶಯಗಳು …Anniversary ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಕವನಗಳು
ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು,
ನಿಮ್ಮ ದಾಂಪತ್ಯ ಜೀವನವು ಸಿಹಿಯಿಂದ ಕೂಡಿರಲಿ ….
ಪ್ರೀತಿಯಿಂದ ಹರಸುತಿರುವೆ ಮದುವೆ ದಿವಸದಿ..
ನೂರು ಕಾಲ ಬಾಳಿರೆಂದು ಸ್ನೇಹದೊಡಲಲಿ… !
ಬಾಳು ಎಂಥ ಅಂದ, ನಿಮ್ಮ ಜೋಡಿ ಚೆಂದ !
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ದೇವರು ನಿಮಗೆ ಇನ್ನೂ ಹೆಚ್ಚಿನ
ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ,
ನಿಮ್ಮ ಬಾಳು ನೂರಾರು ವರ್ಷಗಳ
ಕಾಲ ಸದಾ ನಗುನಗುತಾ ಹೀಗೆ
ಸುಖವಾಗಿರಲೆಂದು ಹಾರೈಸುವೆ.
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…
ನಗು ನಗುತ್ತ ನಡೆಯಲಿ ನಿಮ್ಮೀ … ಈ ಪಯಣ..
ನಿಮ್ಮೆಲ್ಲ ಕನಸು ನನಸಾಗಲೆಂದು ಹಾರೈಸುವೆ…!
ಮದುವೆಯ ಹೊಸ ಬಂಧ
ಬೆಸೆಯಲಿ ನಿಮ್ಮ ಅನುಬಂಧ …
ವಿವಾಹ ಮಹೋತ್ಸವದ ಹಾರ್ದಿಕ ಶುಭಾಶಯಗಳು …..
ಸದಾ ಆಯುಷ್ಯಾರೋಗ್ಯ, ನಗು-ನೆಮ್ಮದಿ ತುಂಬಿದ,
ತುಂಬು ದಾಂಪತ್ಯ ನಿಮ್ಮದಾಗಲಿ …
ತುಂಬು ಹೃದಯದ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು …
ವಿವಾಹ ವಾರ್ಷಿಕೋತ್ಸವ ಶುಭಾಶಯಗಳು,
ನೂರ್ಕಾಲ ಸುಖವಾಗಿ ಸಂದಾಗಿ
ನಿಮ್ಮ ಜೀವನದಲ್ಲಿ ಯಶಸ್ಸು ಸುಖ
ಸಂತೋಷ ತುಂಬಿರಲಿ ಎಂದು ಪ್ರಾರ್ಥಿಸುತ್ತೇನೆ..
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು,
ಪರಮಾತ್ಮನ ಕೃಪೆ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ…
ಸಪ್ತಪದಿ ತುಳಿಯುವ ನವ ದಂಪತಿಗಳಿಗೆ,
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು….
ಪ್ರೀತಿಯ ಅಣ್ಣ ಅತ್ತಿಗೆ ನಿಮ್ಮ ದಾಂಪತ್ಯ ಜೀವನ ಹೀಗೆ ಎಂದೆಂದಿಗೂ ಸಿಹಿಯಾಗಿ ಸಂತೋಷದಿಂದ ತುಂಬಿರಲಿ.
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ನಿಮ್ಮ ಸುಮಧುರ ದಾಂಪತ್ಯ ಜೀವನದ ಮೊದಲ ವರ್ಷ ಪುರೈಸಿದ ಸುಂದರ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಹಾರ್ದಿಕ ಶುಭಾಷಯಗಳು
ವಿವಾಹ ವಾರ್ಷಿಕೋತ್ಸವ ಶುಭಾಶಯಗಳು,
ನೂರ್ಕಾಲ ಸುಖವಾಗಿ ಸಂದಾಗಿ
ನಿಮ್ಮ ಜೀವನದಲ್ಲಿ ಯಶಸ್ಸು ಸುಖ
ಸಂತೋಷ ತುಂಬಿರಲಿ ಎಂದು ಪ್ರಾರ್ಥಿಸುತ್ತೇನೆ..
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು,
ಪರಮಾತ್ಮನ ಕೃಪೆ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ…ಮದುವೆಯ ಹೊಸ ಬಂಧ
ಬೆಸೆಯಲಿ ನಿಮ್ಮ ಅನುಬಂಧ…
ವಿವಾಹ ಮಹೋತ್ಸವದ ಹಾರ್ದಿಕ ಶುಭಾಶಯಗಳು…..
ಸದಾ ಆಯುಷ್ಯಾರೋಗ್ಯ, ನಗು-ನೆಮ್ಮದಿ ತುಂಬಿದ,
ತುಂಬು ದಾಂಪತ್ಯ ನಿಮ್ಮದಾಗಲಿ …
ತುಂಬು ಹೃದಯದ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು …
ದೇವರು ನಿಮಗೆ ಇನ್ನೂ ಹೆಚ್ಚಿನ
ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ,
ನಿಮ್ಮ ಬಾಳು ನೂರಾರು ವರ್ಷಗಳ
ಕಾಲ ಸದಾ ನಗುನಗುತಾ ಹೀಗೆ
ಸುಖವಾಗಿರಲೆಂದು ಹಾರೈಸುವೆ.ಪ್ರೀತಿಯಿಂದ ಹರಸುತಿರುವೆ ಮದುವೆ ದಿವಸದಿ..
ನೂರು ಕಾಲ ಬಾಳಿರೆಂದು ಸ್ನೇಹದೊಡಲಲಿ… !
ಬಾಳು ಎಂಥ ಅಂದ, ನಿಮ್ಮ ಜೋಡಿ ಚೆಂದ !
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
#25 ವರ್ಷಗಳ ದಾಂಪತ್ಯ ಪೂರೈಸುತ್ತಿರುವ ನನ್ನ ಅಣ್ಣ -ಅತ್ತಿಗೆಗೆ
ಸದಾ ಆಯುಷ್ಯಾರೋಗ್ಯ, ನಗು-ನೆಮ್ಮದಿ ತುಂಬಿದ,
ತುಂಬು ದಾಂಪತ್ಯ ನಿಮ್ಮದಾಗಲಿ …
ಸಂಭ್ರಮದ ನೂರಾರು ವಿವಾಹ ವಾರ್ಷಿಕೋತ್ಸವ ನಿಮ್ಮದಾಗಲಿ …
ತುಂಬು ಹೃದಯದ ಶುಭಾಶಯಗಳು …
ತರಲೆ ತುಂಟಾಟ ಆಡಿಕೊಂಡು,
ತಿಂಡಿಗಾಗಿ ಕಿತ್ತಾಡಿಕೊಂಡು
ನನ್ನ ಮೇಲೆ ಮುನಿಸಿಕೊಂಡ ಕ್ಷಣಗಳಿನ್ನು ನೆನಪಿನಲ್ಲಿಯೇ ಇದೇ..
ನಿನಗೆ ಮದುವೆ ಮಾಡಿ ಗಂಡನ ಮನೆಗೆ ಕಳಿಸಿ ಕೊಟ್ಟ ದಿನಗಳು
ಕಣ್ಮುಂದೆಯೇ ಇದ್ದಂತೆ ವರ್ಷ ಕಳೆದಿದೆ…
ನನ್ನ ತಂಗಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು….
ನಮ್ಮ ಮನಸಿನಲ್ಲಿ ಸದಾ ಬಂಧುತ್ವ ಪ್ರೀತಿಯ ಚೆಲ್ಲಿದವಳು ನೀನು …
ಗಂಡನ ಮನೆಯಲ್ಲಿ ಬಾಂಧವ್ಯ ಬೆಳಕು ನೀಡುತ್ತಿರುವವಳು ನೀನು ..
ದಾಂಪತ್ಯಕ್ಕೆ ಕಾಲಿಟ್ಟು ಇಂದಿಗೆ ವರ್ಷ ಕಳೆದಿದೆ…
ನಿನ್ನ ಖುಷಿಯಲ್ಲಿಯೇ ನನ್ನ ಖುಷಿಯನ್ನು ಕಾಣುತ್ತಿರುವೆನು..
ನನ್ನ ಪ್ರೀತಿಯ ತಂಗಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…
ಅಕ್ಕರೆಯಾಗಿದ್ದೆ ನೀ ನಮ್ಮ ಮನೆಗೆ,
ಸಕ್ಕರೆಯಂತಿರು ನೀ ಹೋದ ಮನೆಗೆ,
ಮಾಸದಿರಲಿ ಮೊಗದಲ್ಲಿ ಎಂದಿಗೂ ನಿನ್ನ ನಗೆ,
ಸುಖವಾಗಿರಲಿ ನಿನ್ನ ಸಂಸಾರದ ಜಗೆ.
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…
ಪ್ರೀತಿಯ ಮಗಳಾಗಿದ್ದೆ ಇಲ್ಲಿ,
ಪ್ರೀತಿಯ ಸೊಸೆಯಾಗು ಅಲ್ಲಿ,
ಸಂಶಯ ಬರಬಾರದು ಸಂಸಾರದಲ್ಲಿ,
ಬಂದರೆ ಸರಿಪಡಿಸಿಕೊ ನಿನ್ನಲ್ಲಿ,
ಸಂತೋಷವಾಗಿರು ನೀ ಅಲ್ಲಿ.
ನನ್ನ ತಂಗಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು….
ಹೊಂದಿಕೊಂಡು ಹೋಗು ಎಲ್ಲರ ಜೊತೆ,
ಹಠಮಾಡಬೇಡ ಇಲ್ಲಿಯ ಹಾಗೆ ಮತ್ತೆ,
ನೀ ಇದ್ದಲ್ಲಿ ನಗು ನೆಲೆಸಿರುತ್ತೆ,
ಆಶಿಸುವೆ ನಾ ದೇವರಿಗೆ ನಿನ್ನ ಬದುಕು ಸುಖವಾಗಿರುತ್ತೆ.
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು……
ಪ್ರೀತಿಯ ಸಹೋದರಿ ನಿನ್ನ ಜೊತೆ ಜಗಳ ಮಾಡದ ದಿನವಿಲ್ಲ,
ಮುಂದೆ ಇದು ಗಂಡನ ಮನೆಯಲ್ಲಿ ಸೌಖ್ಯವಲ್ಲ,
ಬಿಟ್ಟು ಹೋಗು ನಿನ್ನ ಹಠ, ಜಗಳಗಳನ್ನಿಲ್ಲಿ,
ಪ್ರೀತಿಯಿಂದ ಇರುವೆ ನೀ ಎಲ್ಲರ ಜೊತೆಯಲ್ಲಿ,
ನಗು ತುಂಬಿರಲಿ ನೀ ಇದ್ದಲ್ಲಿ.ನಮ್ಮನೆಯ ಜ್ಯೋತಿ ನೀನು,
ಹೋಗುವ ಮನೆಗೆ ಬೆಳಕಾಗು ನೀನು,
ಅಪ್ಪ-ಅಮ್ಮನಂತೆ, ಅತ್ತೆ-ಮಾವನನ್ನು ನೋಡಿಕೂ ನೀನು,
ಗಂಡನಿಗೆ ಜೊತೆಯಾಗಿ ಸುಖವಾಗಿರು ನೀನು.ವರುಷಗಳ ಹಿಂದೆ ಕೂಡಿಬಂದ ಆ ಸುಂದರ ಘಳಿಗೆ
ಹರುಷ ತಂದಿದೆ ನಿನ್ನ ಬಾಳಿಗೆ,
ನಿಮ್ಮಿಬ್ಬರ ಪ್ರೇಮೋತ್ಸವದ ದಾಂಪತ್ಯಕ್ಕೆ ವರುಷದ ಸಂಭ್ರಮ,
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ನನ್ನ ಮುದ್ದು ತಂಗ್ಯಮ್ಮ…ನನ್ನ ಮುದ್ದು ಪೆದ್ದು ತಂಗಿಯೇ ನೆನಪಿದೆಯಾ!
ನೀನು ಹಠ ಮಾಡುತ್ತಿದ್ದ ಸಮಯಗಳು…
ಈಗಲೂ ನಗು ತರಿಸುತ್ತಿದೆ ನಿನ್ನ ಮಾತುಗಳು…
ಮದುವೆಯಾದ ಮೇಲೆ ಕಂಡಿರುವೇ ದಾಂಪತ್ಯದ ಹೊನಲು…
ಮತ್ತಷ್ಟು ಹೆಚ್ಚಾಗಲಿ ನಿನ್ನ ಉಲ್ಲಾಸ ಉತ್ಸಾಹಗಳು…
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…ಅಣ್ಣ ತಂಗಿಯ ಸಂಬಂಧವನ್ನು ತೂಗಿ…
ಹೊರಟೆ ತವರು ಮನೆ ಎಂದು ಕೂಗಿ…
ಅತ್ತೆಯ ಮನೆಯ ಸೇರಿದೆ ಬಾಳ ಸಂಗಾತಿಗೆ ಜೊತೆಯಾಗಿ…
ಸಾಗುತ್ತಿರುವೆ ಸಂಸಾರವೆಂಬ ಭೋಗಿ…
ಇಂದಿಗೆ ವರ್ಷ ತುಂಬಿದೆ ನೀನು ಮದುವೆಯಾಗಿ…
ಹೀಗೆ ಜೀವನ ನಡೆಸುತ್ತಿರು ಖುಷಿ ಖುಷಿಯಾಗಿ..
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಮುದ್ದು ತಂಗಿ…ಬೆಳಕಾಗಿರು ನೀ ಎಂದೆಂದೂ,
ಯಾರೂ ದೂರಬಾರದು ನಿನ್ನೆಂದೂ,
ಸುಖವಾಗಿರಲಿ ನನ್ನ ಸಹೋದರಿಯಾದ ನಿನ್ನ ಜೀವನ ಇಂದು, ಮುಂದು, ಎಂದೆಂದೂ.
ಪ್ರೀತಿಯ ಸಹೋದರಿಯೇ,
ಜೊತೆಗೂಡಿ ಬೆಳೆದೆವು,
ಹೇಗೂ ಹೊಂದಿಕೊಂಡಿದ್ದೆವು,
ಆಯಿತು ನಿನ್ನ ಮದುವೆಯು,
ನಮಗಾಯಿತು ಒಟ್ಟಿಗೆ ಖುಷಿ ಮತ್ತು ನೋವು,
ಸುಖದಿಂದಿರೀ ದಂಪತಿಗಳಿಬ್ಬರೂ ನೀವು,
ಯಾವಾಗಲೂ ನಿನ್ನ ಸುಖವನ್ನೇ ಬಯಸುವೇವು ನಾವು.
ನೂರು ವರುಷ ಕೂಡಿ
ಬಾಳುವ ಜೋಡಿ ನಿಮ್ಮದಾಗಲಿ,
ನಿಮ್ಮನ್ನು ಸಂತೋಷದಿಂದ
ಕಣ್ತುಂಬಿಕೊಳ್ಳುವ ಅದೃಷ್ಟ ನಮ್ಮದಾಗಲಿ…
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ.